March 23, 2026

ಮಂಡ್ಯದಲ್ಲಿ ಮತ್ತೊಂದು ಘಟನೆ: ದಲಿತ ಬಾಲಕಿ ಮೇಲೆ 60 ವರ್ಷದ ವೃದ್ಧನಿಂದ ಅತ್ಯಾಚಾರ

0
Screenshot_2022-10-14-13-06-20-86_680d03679600f7af0b4c700c6b270fe7.jpg

ಮಂಡ್ಯ: ಮಳವಳ್ಳಿ ತಾಲ್ಲೂಕು ಹಲಗೂರು ಬಳಿಯ ಹಳ್ಳಿಯೊಂದರ ದಲಿತ ಬಾಲಕಿ ಮೇಲೆ 60 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿಗೆ ತಂದೆ ಇಲ್ಲ, ತಾಯಿಯು ಮಗಳನ್ನು ಅಜ್ಜಿ–ತಾತನ ಮನೆಯಲ್ಲಿ ಬಿಟ್ಟು ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಸರ್ಕಾರಿ ಶಾಲೆಯಲ್ಲಿ ಬಾಲಕಿ 10ನೇ ತರಗತಿ ಓದುತ್ತಿದ್ದಳು.

ಅ.6ರಂದು ಬಾಲಕಿಯು ಅಜ್ಜಿ ಜೊತೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದಳು. ಇದನ್ನೇ ದುರುಪಯೋಗ ಮಾಡಿ ಕೊಂಡ ಆರೋಪಿ ಬಾಲಕಿಗೆ ಊಟ, ತಿಂಡಿ ಕೊಡಿಸಿ ಸಮೀಪದಲ್ಲೇ ಇದ್ದ ಬಸವನಬೆಟ್ಟದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.

ನಂತರ ಅ.7ರಂದು ವಾಪಸ್‌ ಕರೆತಂದು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಿ ಮತ್ತೆ ಅತ್ಯಾಚಾರ ಎಸಗಿದ್ದಾನೆ. ನಂತರ ಅಜ್ಜಿ ಮನೆಗೆ ಬಾಲಕಿಯನ್ನು ತಂದು ಬಿಟ್ಟಿದ್ದಾನೆ. ಆಕೆಯ ಅಜ್ಜಿ, ಅಕ್ಕ ಎಲ್ಲಿಗೆ ಹೋಗಿದ್ದೆ ಎಂದು ವಿಚಾರಿಸಿದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ.

ಅ.8ರಂದು ಊರ ಮುಖಂಡರ ಜೊತೆ ತೆರಳಿ ಬಾಲಕಿಯ ಚಿಕ್ಕಪ್ಪ ಹಲಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೊ ಅಡಿ ಪ್ರಕರಣ ದಾಖಲು ಮಾಡಿ ಕೊಂಡಿರುವ ಪೊಲೀಸರು ಆರೋಪಿ ಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!