ಎರಡು ದ್ವಿಚಕ್ರವಾಹನಗಳ ನಡುವೆ ಮುಖಾಮುಖಿ ಢಿಕ್ಕಿ: ಒರ್ವ ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ
ದೊಡ್ಡಬಳ್ಳಾಪುರ: ಎರಡು ದ್ವಿಚಕ್ರವಾಹನಗಳ ನಡುವೆ ಬುಧವಾರ ರಾತ್ರಿ ಕೊಡಿಗೇಹಳ್ಳಿ ಸಮೀಪ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಹೊನ್ನಾಘಟ್ಟ ಗ್ರಾಮದ ರಾಹುಲ್(22) ಮೃತಪಟ್ಟವರು.
ಇದೇ ಗ್ರಾಮದ ಚಂದನ್, ಕೋಡಿಗೆಹಳ್ಳಿಯ ಚಂದನ ಹಾಗೂ ತಿಪ್ಪೂರು ಗ್ರಾಮದ ಭೀಮೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




