May 10, 2026

ಸುಳ್ಯದ ಅರಂತೋಡು ಕೊಡಂಕಿರಿ ಬಳಿ ಚರಂಡಿಗೆ ಬಿದ್ದ ಕಾರು

0
image_editor_output_image1362516435-1661150735790.jpg

ಸುಳ್ಯ: ಪುತ್ತೂರಿನತ್ತ ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಸುಳ್ಯದ ಅರಂತೋಡು ಕೊಡಂಕಿರಿ ಬಳಿ ಚರಂಡಿಗೆ ಬಿದ್ದ ಘಟನೆ ರವಿವಾರ ನಡೆದಿದೆ.

ಪುತ್ತೂರಿಗೆ ಚಲಿಸುತ್ತಿದ್ದ ಸಂದರ್ಭ ರಸ್ತೆಯಲ್ಲಿ ತಿರುವು ಇದ್ದರೂ ಗಮನಕ್ಕೆ ಬಾರದೇ ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ನೇರವಾಗಿ ಹೋಗಿ ರಸ್ತೆ ಬದಿಯ ಪೊದೆಯಲ್ಲಿ ಸಿಲುಕಿಕೊಂಡಿದೆ.

ಸ್ಥಳಕ್ಕೆ ಸ್ಥಳೀಯರು ಆಗಮಿಸಿ ಸ್ಕಾರ್ಪಿಯೋವನ್ನು ಎತ್ತುವ ಕಾರ್ಯಾಚರಣೆ ಮಾಡಿದ್ದಾರೆ. ಪ್ರಯಾಣಿಕರು ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!