February 3, 2026

ಕೈದಿಗೆ ನೀಡಲು ತಂದಿದ್ದ ಬಟ್ಟೆಯಲ್ಲಿ ಗಾಂಜಾ ಪತ್ತೆ: ಮೂವರ ಬಂಧನ

0
image_editor_output_image-776912439-1661142909293.jpg

ಶಿವಮೊಗ್ಗ: ಕೈದಿಗೆ ನೀಡಲು ತಂದಿದ್ದ ಬಟ್ಟೆ ಬ್ಯಾಗಿನಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರ ಕಣ್ತಪ್ಪಿಸಿ ಕೇಂದ್ರ ಕಾರಾಗೃಹದ ಒಳಗೆ ಗಾಂಜಾ ಸಾಗಣೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಶಿವಮೊಗ್ಗ ಜೆ.ಪಿ.ನಗರದ ಮೊಹಮ್ಮದ್ ಮುಸಿಮಿನ್ (26), ರಾಜೀವ್ ಗಾಂಧಿ ಬಡಾವಣೆಯ ಅಬ್ದುಲ್ ಹಫೀಜ್ (24) ಮತ್ತು ಮೊಹಮ್ಮದ್ ಹುಸೇನ್ (22) ಎಂಬುವವರನ್ನು ಬಂಧಿಸಲಾಗಿದೆ.

ವಿಚಾರಣಾಧೀನ ಕೈದಿಯೊಬ್ಬನನ್ನು ಭೇಟಿಯಾಗಿ, ಆತನಿಗೆ ಬಟ್ಟೆ ನೀಡಲು ಈ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಜೀನ್ಸ್ ಪ್ಯಾಂಟಿನ ಸೊಂಟದ ಭಾಗ ಮತ್ತು ಕಾಲಿನ ಭಾಗ, ಶರ್ಟಿನ ಕಾಲರ್ ಭಾಗದಲ್ಲಿ ಗಾಂಜಾವನ್ನು ತುಂಬಿದ್ದರು. ಕೆಎಸ್ಐಎಸ್ಎಫ್ ಸಿಬ್ಬಂದಿ ತಪಾಸಣೆ ವೇಳೆ ಈ ವಿಚಾರ ಗೊತ್ತಾಗಿದೆ. ಬ್ಯಾಗ್ ಪರಿಶೀಲಿಸಿದ ಸಿಬ್ಬಂದಿಗೆ ಒಟ್ಟು 100 ಗ್ರಾಂ ಗಾಂಜಾ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!