February 3, 2026

ಮಂಜೇಶ್ವರ: ರಿವಾಲ್ವರ್ ಹಾಗೂ ಸಜೀವ ಗುಂಡು ಸಹಿತ ತಿರುಗಾಡುತ್ತಿದ್ದ ಆರೋಪಿಗಳು ಅರೆಸ್ಟ್

0
IMG-20220818-WA0003.jpg

ಮಂಜೇಶ್ವರ: ಆಟೋ ರಿಕ್ಷಾದಲ್ಲಿ ಮಾರಕಾಸ್ತ್ರಗಳ ಸಹಿತ ತಿರುಗಾಡುತ್ತಿದ್ದ ಯುವಕನನ್ನು ಪೊಲೀಸರ ಕಸ್ಟಡಿಯಿಂದ ಬಲವಂತವಾಗಿ ಬಿಡುಗಡೆಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದು, ಇವರಿಂದ ರಿವಾಲ್ವರ್ ಹಾಗೂ ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಹಮ್ಮದ್ ರಹೀಸ್(25), ಮುಹಮ್ಮದ್ ಹನೀಫ್(40) ಮತ್ತು ಮುಹಮ್ಮದ್ ರಿಯಾಝ್(40) ಬಂಧಿತ ಆರೋಪಿಗಳಾಗಿದ್ದಾರೆ.

ಉಪ್ಪಳ ಮಜಲ್ ನಲ್ಲಿ ಆಟೋ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡು ಆಟೋವನ್ನು ತಪಾಸಣೆ ನಡೆಸಿದಾಗ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!