February 3, 2026

ಮದುವೆ ನಡೆಯುತ್ತಿದ್ದ ಕಟ್ಟಡದ ಬಾಲ್ಕನಿ ಗೋಡೆ ಕುಸಿತ: ಮೂವರು ಮೃತ್ಯು, 34 ಮಂದಿ ಗಾಯ

0
Screenshot_2022-04-22-11-40-08-40_680d03679600f7af0b4c700c6b270fe7.jpg

ಲಖನೌ: ಸರೋಜಿನಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜ್ನೋರ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಮದುವೆ ನಡೆಯುತ್ತಿದ್ದ ಕಟ್ಟಡದ ಬಾಲ್ಕನಿ ಮತ್ತು ಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 34 ಮಂದಿ ಗಾಯಗೊಂಡಿದ್ದಾರೆ.

ಮೃತರಲ್ಲಿ 5 ವರ್ಷದ ಮಗು ಶ್ರದ್ಧಾ ಕೂಡ ಸೇರಿದೆ. ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 11.30ರ ಸುಮಾರಿಗೆ ಮದುವೆಯ ವಿಧಿವಿಧಾನಗಳು ಮುಗಿದು ಅತಿಥಿಗಳು ಊಟಕ್ಕೆ ಕುಳಿತಿದ್ದಾಗ ಈ ಘಟನೆ ನಡೆದಿದೆ.

‘ಇದ್ದಕ್ಕಿದ್ದಂತೆ ಗೋಡೆ ಮತ್ತು ಬಾಲ್ಕನಿ ಕುಸಿದು ಬಿದ್ದಿದ್ದು, ಕೆಲವೇ ನಿಮಿಷಗಳಲ್ಲಿ ಎಲ್ಲವೂ ಮುಗಿದು ಹೋಯಿತು’ ಎಂದು ಪ್ರತ್ಯಕ್ಷದರ್ಶಿ ಅನಿಕೇತ್ ಸಿಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!