February 1, 2026

ಚಾರ್ಜಿಂಗ್ ವೇಳೆ ಇಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಓರ್ವ ಮೃತ್ಯು, ಮೂವರು ಗಂಭೀರ

0
image_editor_output_image1844628726-1650542480819.jpg

ಹೈದರಾಬಾದ್: ಹೈದರಾಬಾದ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗೆ ಚಾರ್ಜ್ ಮಾಡಲು ಪ್ಲಗ್ ಹಾಕಿದ ಸಂದರ್ಭದಲ್ಲಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಒಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಹೈದರಾಬಾದ್ ನ ನಿಜಾಮಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಪ್ಯೂರ್ ಇಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿಹೊತ್ತುಕೊಂಡು ಸ್ಫೋಟಗೊಂಡಿದ್ದು, ಇದು ಮೂರನೇಯ ಘಟನೆಯಾಗಿದೆ. ಈವರೆಗೆ ಒಂದು ಓಲಾ, ಒಕಿನಾವಾದ ಎರಡು, ಪ್ಯೂರ್ ಇವಿಯ ಮೂರು ಹಾಗೂ 20 ಜಿತೇಂದ್ರ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೆಂಕಿಹೊತ್ತಿಕೊಂಡು ಸ್ಫೋಟಗೊಂಡಿರುವ ಪ್ರಕರಣ ನಡೆದಿತ್ತು ಎಂದು ವರದಿ ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!