February 2, 2026

ಆಶ್ರಮದ ನಾಲ್ವರು ಬಾಲಕಿಯರು ಕಾಲುವೆಯಲ್ಲಿ ಮುಳುಗಿ ಮೃತ್ಯು

0
Screenshot_2022-04-21-04-28-25-09_680d03679600f7af0b4c700c6b270fe7.jpg

ಖಾಂಡವಾ: ಸಾಧ್ವಿ ರಿತಂಬರ ಅವರು ನಡೆಸುವ ಆಶ್ರಮದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ನಾಲ್ವರು ಬಾಲಕಿಯರು ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಾಂಡವಾ ಜಿಲ್ಲೆಯಲ್ಲಿ ನಡೆದಿದೆ.

ಈ ಕುರಿತು ಪೊಲೀಸ್‌ ಅಧಿಕಾರಿ ಬಲರಾಮ್‌ ಸಿಂಗ್‌ ಮಾಹಿತಿ ನೀಡಿದ್ದು ಮೃತಪಟ್ಟ ಬಾಲಕಿಯರು 10-11 ವರ್ಷದವರಾಗಿದ್ದು, .ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಸಂದರ್ಭ ಓರ್ವ ಬಾಲಕಿ ಮುಳುಗಿದ್ದು, ರಕ್ಷಿಸಲು ಪ್ರಯತ್ನಿಸಿದ ಉಳಿದು ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದ್ದಾರೆ.

ಇನ್ನು ಮೃತ ಬಾಲಕಿಯರು ಖರಗೋನ ಜಿಲ್ಲೆಗೆ ಸೇರಿದವರಾಗಿದ್ದು, ಶವಗಳನ್ನು ಕಾಲುವೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!