March 20, 2026

ಪುತ್ತೂರು: ಕಾರಿನ ಅಡಿಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹರಿದು ಮೃತ್ಯು

0
image_editor_output_image294174192-1650474851750.jpg

ಪುತ್ತೂರು: ಕಾರಿನ ಅಡಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹರಿದು ಸಾವನ್ನಪ್ಪಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ದೇವಸ್ಥಾನ ಗದ್ದೆ ಬದಿಯಲ್ಲಿ ಕಾರ್ ಅನ್ನು ಪಾರ್ಕ್ ಮಾಡಿ ಅದರ ಅಡಿಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹರಿದಿದೆ ಎನ್ನಲಾಗಿದೆ.

ಕಾರು ಮೈ ಮೇಲೆ ಹರಿದ ಹಿನ್ನೆಲೆ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿಯ ಪರಿಚಯ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

error: Content is protected !!