ಲೈಸೆನ್ಸ್ ಪಡೆಯದೆ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್: ಮಾಲಕರಿಗೆ ನೋಟಿಸ್ ಜಾರಿ
ಬೆಂಗಳೂರು: “ಹಲಾಲ್ ಕಟ್- ಜಟ್ಕಾಕಟ್’ ಗೊಂದಲ ತಿಳಿಗೊಂಡ ಬೆನ್ನಲ್ಲೇ ನಗರದಲ್ಲಿ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ತಕ್ಷಣ ಅಗತ್ಯ ದಾಖಲೆಗಳೊಂದಿಗೆ ಪರವಾನಗಿ ಪಡೆಯುವಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಹಲಾಲ್ ಕಟ್ ವಿರುದ್ಧ ನಡೆದಿದ್ದ ಪ್ರಚಾರದಲ್ಲಿ ಹಿಂದವೀ ಮೀಟ್ ಮಾರ್ಟ್ ಸಕ್ರಿಯವಾ ಗಿತ್ತು. ಆದರೆ, ವ್ಯಾಪಾರ ನಡೆಸಲು ಹಿಂದವೀ ಮೀಟ್ ಮಾರ್ಟ್‌ಗಳು ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ. ಹೀಗಾಗಿ, ಹಲವು ಅಂಶಗಳನ್ನು ಉಲ್ಲೇಖೀಸಿ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ.




