March 24, 2026

ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿ ಮೂರು ವರ್ಷದ ಮಗು ಮೃತ್ಯು

0
image_editor_output_image803636166-1650346618553.jpg

ಕೊಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಮುಕ್ಕಮ್ ನಲ್ಲಿ ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿಕೊಂಡು ಮೂರು ವರ್ಷದ ಮಗು ಮೃತಪಟ್ಟಿದ್ದಾಳೆ.

ಮೃತಳನ್ನು ಬಿಜು ಮತ್ತು ಆರ್ಯ ದಂಪತಿಯ ಪುತ್ರಿ ದೇವಿಕಾ ಎಂದು ಗುರುತಿಸಲಾಗಿದೆ.

ಮುಚ್ಚಳವು ಗಂಟಲಿನಲ್ಲಿ ಸಿಲುಕಿಕೊಂಡ ತಕ್ಷಣ ಮಗುವನ್ನು ಮುಕ್ಕಮ್ ನ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮುಚ್ಚಳ ಗಂಟಲಿನಲ್ಲಿ ಬಿಗಿಯಾಗಿ ಸಿಕ್ಕಿಕೊಂಡಿದೆ ಎಂದು ಅರಿತ ವೈದ್ಯರು ಮಗುವನ್ನು ಕೂಡಲೇ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು,

ಆದರೆ ರಾತ್ರಿ ಮಗು ಅಸುನೀಗಿದೆ.ಪೋಷಕರು ಚಿಕ್ಕ ಮಕ್ಕಳ ಕೈಯ್ಯಲ್ಲಿ ನಾಣ್ಯ, ಮುಚ್ಚಳ ಮೊದಲಾದ ಸಾಮಾನುಗಳನ್ನು ಕಂಡರೆ ಕೂಡಲೇ ಅದನ್ನು ಅವರಿಂದ ಪಡೆದುಕೊಳ್ಳಬೇಕು.

ಮಗು ಅಳುತ್ತದೆ ಎಂಬ ಕಾರಣಕ್ಕೆ ಅವರ ಕೈಯ್ಯಲ್ಲೇ ಬಿಟ್ಟರೆ ಅದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು,

Leave a Reply

Your email address will not be published. Required fields are marked *

error: Content is protected !!