February 3, 2026

ಮಹಾರಾಷ್ಟ್ರದ ಶಿವಸೇನಾ ಶಾಸಕನ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
image_editor_output_image1679957391-1650323014171.jpg

ಮಹಾರಾಷ್ಟ್ರ: ಮಹಾರಾಷ್ಟ್ರದ ಶಿವಸೇನಾ ಶಾಸಕ ಮಂಗೇಶ್ ಕುಡಾಲ್ಕರ್ ಅವರ ಪತ್ನಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗೇಶ್ ಕುಡಾಲ್ಕರ್ ಅವರ ಪತ್ನಿ ರಜನಿ (42) ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರಜನಿ ಅವರ ಸಾವು ಆತ್ಮಹತ್ಯೆಯೋ ಅಸಹಜ ಸಾವೋ ಎಂಬ ಕುರಿತು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಪೊಲೀಸರು ಮೃತದೇಹವನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇನ್ನು ಕುರ್ಲಾ ವಿಧಾನಸಭಾ ಕ್ಷೇತ್ರದಿಂದ ಕುಡಾಲ್ಕರ್ ಎರಡು ಬಾರಿ ಶಿವಸೇನೆ ಶಾಸಕರಾಗಿದ್ದು, ಅವರ ಪತ್ನಿ ಭಾನುವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!