February 2, 2026

ಸುಳ್ಯ: ಜಟ್ಟಿಪಳ್ಳದಲ್ಲಿ ರಾತ್ರಿ ಮನೆಗೆ ನುಗ್ಗಿದ ಕಳ್ಳನನ್ನು ಹಿಂಬಾಲಿಸಿ ಹಿಡಿದ ಸ್ಥಳೀಯ ಯುವಕರು

0
image_editor_output_image733658791-1650280044051.jpg

ಸುಳ್ಯ: ನಗರದ ಜಟ್ಟಿಪಳ್ಳ ಕಾಲೋನಿಯಲ್ಲಿ ರಾತ್ರಿ ಎರಡು ಗಂಟೆಗೆ ಮನೆಗೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಫೋನ್ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದ.
ಪರಾರಿಯಾಗುವ ಸಮಯ ಎಚ್ಚರಗೊಂಡ ಮನೆಯವರು ಬೊಬ್ಬೆ ಹಾಕಿದಾಗ ವಿಷಯ ತಿಳಿದ ಸ್ಥಳೀಯ ಕೆಲವು ಯುವಕರು ಕಳ್ಳನನ್ನು ಬೆಂಬೆತ್ತಿದ್ದಾರೆ.

ಈ ವೇಳೆ ತಪ್ಪಿಸಿಕೊಂಡು ಕಳ್ಳ ಮತ್ತೆ ಕಾಣಲೇ ಇಲ್ಲ. ಸ್ಥಳೀಯ ಯುವಕರು ರಾತ್ರೋರಾತ್ರಿ ಸಂಬಂಧಪಟ್ಟ ಸಿಸಿಟಿವಿ ಫ್ಯೂಟೆಜೆ ಸಂಗ್ರಹಿಸಿ ಬೆಳಿಗ್ಗಿನ ಜಾವ 6 ಗಂಟೆಯ ಸಮಯದಲ್ಲಿ ಆತನ ಗುರುತು ಪತ್ತೆ ಹಚ್ಚಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಇಂದು ವರದಿಯಾಗಿದೆ.

ಕಳ್ಳತನ ಮಾಡಿರುವ ವ್ಯಕ್ತಿ ಕೊಪ್ಪಳ ಮೂಲದ ಶರಣದಪ್ಪ ಎಂಬಾತ ನಾಗಿದ್ದು ಸುಳ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!