February 2, 2026

ಮದುವೆ ಮುಗಿಸಿ ವಾಪಸ್ ಹೋಗುತ್ತಿದ್ದ ಜೀಪ್‌ಗೆ ಟ್ರಕ್‌ ಢಿಕ್ಕಿ: ಜೀಪ್‌ನಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರ

0
image_editor_output_image-1907913371-1650271796906.jpg

ಉತ್ತರಪ್ರದೇಶ: ಮದುವೆ ಮುಗಿಸಿ ವಾಪಸ್‌ ಆಗುತ್ತಿದ್ದ ಜೀಪ್‌ ಹಾಗೂ ಟ್ರಕ್‌, ಜಿಲ್ಲೆಯ ಗೌರಿಗಂಜ್‌ ಪ್ರದೇಶದಲ್ಲಿ ಡಿಕ್ಕಿಯಾಗಿವೆ. ಪರಿಣಾಮವಾಗಿ ಜೀಪ್‌ನಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಬುಗಂಜ್‌ ಸಗ್ರಾ ಆಶ್ರಮದ ಸಮೀಪ ಭಾನುವಾರ ತಡರಾತ್ರಿ 12.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಮೇಥಿಯ ಬೇರೆಬೇರೆ ಊರುಗಳ ಜನರಿದ್ದ ಬೊಲೆರೊ ಜೀಪ್‌, ರಾಯ್‌ ಬರೇಲಿ ಜಿಲ್ಲೆಯ ನಾಸಿರಾಬಾದ್‌ ಪ್ರದೇಶದಿಂದ ಬರುತ್ತಿತ್ತು ಎಂದು ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಎಸ್‌ಪಿ) ದಿನೇಶ್‌ ಸಿಂಗ್‌ ಹೇಳಿದ್ದಾರೆ.

ಮೃತಪಟ್ಟವರನ್ನು ಕಲ್ಲು (40), ಅವರ ಮಗ ಸೌರಭ್‌ (8), ಕೃಷ್ಣ ಕುಮಾರ್‌ ಸಿಂಗ್ (30), ಶಿವ ಮಿಲನ್, ರವಿ ತಿವಾರಿ ಮತ್ತು ತ್ರಿವೇಣಿ ಪ್ರಸಾದ್‌ ಎಂದು ಗುರುತಿಸಲಾಗಿದೆ. ನಾಲ್ವರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಲಖನೌಗೆ ಕರೆದೊಯ್ಯಲು ಶಿಫಾರಸು ಮಾಡಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!