ರಸ್ತೆ ಅಪಘಾತ: ಟೇಬಲ್ ಟೆನಿಸ್ ಆಟಗಾರ ಮೃತ್ಯು
ಶಿಲ್ಲಾಂಗ್: 83ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ತೆರಳುತ್ತಿದ್ದ ಭಾರತದ ಭರವಸೆಯ ಟೇಬಲ್ ಟೆನಿಸ್ ಆಟಗಾರ ತಮಿಳುನಾಡಿನ 18 ರ ಹರೆಯದ ವಿಶ್ವ ದೀನದಯಾಳನ್ ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅವರು ತಮ್ಮ ಮೂವರು ಸಹ ಆಟಗಾರರೊಂದಿಗೆ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರು ದಿಕ್ಕಿನಿಂದ ಬರುತ್ತಿದ್ದ 12 ಚಕ್ರಗಳ ಟ್ರೈಲರ್ ರಸ್ತೆ ವಿಭಜಕವನ್ನು ದಾಟಿ ಶಾಂಗ್‌ಬಾಂಗ್ಲಾದಲ್ಲಿ ಕಾರಿಗೆ ಢಿಕ್ಕಿ ಹೊಡೆದು ಕಮರಿಗೆ ಧುಮುಕಿತು.
ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ದೀನದಯಾಳನ್ ಸಾವನ್ನಪ್ಪಿರುವುದನ್ನು ಎಂದು ನಾಂಗ್‌ಪೋಹ್ ಸಿವಿಲ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.




