ಮೈಸೂರಿನಲ್ಲಿ ನೆಲೆಸಿದ್ದ ಸುಳ್ಯದ ದಂಪತಿ ಆತ್ಮಹತ್ಯೆ
ಸುಳ್ಯ: ಮೈಸೂರಿನಲ್ಲಿ ನೆಲೆಸಿದ್ದ ಸುಳ್ಯದ ಕುಕ್ಕಾಜೆಕಾನದವರಾಗಿರುವ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ ಎಂದು ಗುರುತಿಸಲಾಗಿದೆ.
ಸುಳ್ಯ ಕುಕ್ಕಾಜೆಕಾನದ ಮಾಧವ ನಾಯ್ಕ್ ರವರು 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ಅಲ್ಲಿ ನೆಲೆಸಿದ್ದು, ಕಳೆದ ವರ್ಷ ಪುತ್ರಿಯ ಮದುವೆ ಕೂಡ ಮಾಡಿಸಿದ್ದು, ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.




