March 20, 2026

ಟ್ರಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರು ಸಜೀವ ದಹನ

0
image_editor_output_image-157826762-1650087991828.png

ಹರಿಯಾಣ: ಟ್ರಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಸಜೀವ ದಹನವಾದ ಘಟನೆ ಹರಿಯಾಣದ ಪಾಣಿಪತ್ನ ರೋಹ್ಟಕ್ ಹೆದ್ದಾರಿಯಲ್ಲಿ ನಡೆದಿದೆ.

ಮೃತಪಟ್ಟ ದುರ್ದೈವಿಗಳನ್ನು ಕರ್ನಾಲ್​ನ ನಿವಾಸಿಗಳು ಎಂದು ಗುರುತಿಸಲಾಗಿದೆ.

ಪಾಣಿಪತ್​​ನಿಂದ ಗೊಹಾನಾ ಕಡೆಗೆ ತೆರಳುತ್ತಿದ್ದ ಕಾರಿಗೆ ಇಸ್ರಾನಾ ಅನಾಜ್ ಮಂಡಿ ಬಳಿ ವೇಗವಾಗಿ ಬಂದ ಟ್ರಕ್​ ಡಿಕ್ಕಿ ಹೊಡೆದಿದ್ದು ಇದೇ ವೇಳೆಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, 8 ವರ್ಷದ ಮಗು ಸೇರಿ ದಂಪತಿ ಸಜೀವ ದಹನವಾಗಿದ್ದಾರೆ. ಕಾರು ಚಾಲಕ​ ಗಂಭೀರವಾಗಿ ಗಾಯಗೊಂಡಿದ್ದಾನೆ.

ಪ್ರತಾಪ್​ ವಾಯುಸೇನೆಯುಲ್ಲಿ ಫ್ಲೈಯಿಂಗ್​ ಆಫೀಸರ್​ ಆಗಿ ಈಗಾಗಲೇ ನಿವೃತ್ತರಾಗಿದ್ದಾರೆ. ಇವರಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ.

ಪತ್ನಿ ಖಾಜಾಗೆ ಹೃದಯದಲ್ಲಿ ಸಮಸ್ಯೆ ಇದ್ದ ಕಾರಣ ಚಿಕಿತ್ಸೆಗೋಸ್ಕರ ಪಾಣಿಪತ್​ಗೆ ತೆರಳಬೇಕಾಗಿತ್ತು. ಅಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಗಾಯಗೊಂಡಿರುವ ಡ್ರೈವರ್​​ ಜಗ್ಬೀರ್​ಗೆ ಚಿಕಿತ್ಸೆ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!