February 1, 2026

ರಷ್ಯಾದ ರಾಕೆಟ್ ದಾಳಿಯಲ್ಲಿ ಉಕ್ರೇನ್ ನ ಖ್ಯಾತ ನಟಿ ಮೃತ್ಯು

0
Screenshot_2022-03-18-12-36-28-16_680d03679600f7af0b4c700c6b270fe7.jpg

ಕೀವ್: ಉಕ್ರೇನ್ ನಲ್ಲಿ ರಷ್ಯಾ ಪಡೆ ದಾಳಿಯನ್ನು ಮುಂದುವರಿಸಿದ್ದು, ಕೀವ್ ನ ವಸತಿ ಪ್ರದೇಶದ ಕಟ್ಟಡಗಳ ಮೇಲಿನ ರಾಕೆಟ್ ದಾಳಿಯಲ್ಲಿ ಉಕ್ರೇನ್ ನ ಖ್ಯಾತ ನಟಿ ಒಕ್ಸಾನಾ ಶ್ವೆಟ್ಸ್ (67ವರ್ಷ) ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ನಟಿ ಒಕ್ಸಾನಾ ಸಾವನ್ನಪ್ಪಿರುವುದನ್ನು ದ ಯಂಗ್ ಥಿಯೇಟರ್ ಖಚಿತಪಡಿಸಿದ್ದು, ಕೀವ್ ನ ಜನವಸತಿ ಪ್ರದೇಶದ ಕಟ್ಟಡಗಳ ಮೇಲೆ ರಷ್ಯಾ ಪಡೆಯ ರಾಕೆಟ್ ದಾಳಿಯಲ್ಲಿ ಒಕ್ಸಾನಾ ಮೃತಪಟ್ಟಿರುವುದಾಗಿ ವಿವರಿಸಿದೆ.

ದ ಹಾಲಿವುಡ್ ರಿಪೋರ್ಟರ್ ಪ್ರಕಾರ, ನಟಿ ಒಕ್ಸಾನಾ ಅವರು ಉಕ್ರೇನ್ ನ ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರರಾಗಿದ್ದರು. ಒಕ್ಸಾನಾ ಅವರು ಉಕ್ರೇನ್ ನ ಗೌರವಾನ್ವಿತ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!