March 23, 2026

ಹೆಬ್ರಿ: ಶಾಲೆಗೆಂದು ಹೊರಟ ವಿದ್ಯಾರ್ಥಿ ಸೈಕಲ್ ಸ್ಕಿಡ್ ಆಗಿ ಬಿದ್ದು ಮೃತ್ಯು

0
image_editor_output_image-408005153-1647574794627.jpg

ಹೆಬ್ರಿ: ಶಾಲೆಗೆಂದು ಹೊರಟ ವಿದ್ಯಾರ್ಥಿ ಸೈಕಲ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೃತಪಟ್ಟ ಘಟನೆ ಮಾ.16ರಂದು ಹರಿಖಂಡಿಗೆ ಕಂಚಿಗುಂಡಿ ರಸ್ತೆಯಲ್ಲಿ ನಡೆದಿದೆ.

ಹರಿಖಂಡಿಗೆ ಕಂಚಿಗುಂಡಿ ನಿವಾಸಿ ಸತೀಶ್ ಕುಲಾಲ್ ಎಂಬವರ ಮಗ, 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್(13) ಮೃತ ಬಾಲಕ ಎಂದು ಗುರುತಿಸಲಾಗಿದೆ.

ಹರಿಖಂಡಿಗೆ ಕಂಚಿಗುಂಡಿಯಿಂದ ಸೈಕಲ್ ನಲ್ಲಿ ಹೋಗುತ್ತಿರುವಾಗ ಸೈಕಲ್ ಸ್ಕಿಡ್ ಆದ ಪರಿಣಾಮ ರಸ್ತೆಗೆ ಕವುಚಿ ಬಿದ್ದ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶ್ರೇಯಸ್, ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!