February 2, 2026

ಪೋಲ್ಯಾಂಡ್ 2021ನೇ ಸಾಲಿನ ವಿಶ್ವಸುಂದರಿ ಕಿರೀಟ: ಭಾರತೀಯ ಮೂಲದ ಶ್ರೀ ಸೈನಿ ರನ್ನರ್ ಅಪ್

0
image_editor_output_image-2003877145-1647508048958.jpg

ಪೋರ್ಟ್ ರಿಕೋ: ಪೋಲ್ಯಾಂಡ್ ನ ಕರೋಲಿನಾ ಬಿಲಾವಸ್ಕ್ 2021ನೇ ಸಾಲಿನ ವಿಶ್ವಸುಂದರಿ ಕಿರೀಟವನ್ನು ಶುಕ್ರವಾರ (ಮಾರ್ಚ್ 17) ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪೋರ್ಟೊ ರಿಕೋದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ವಿಶ್ವಸುಂದರಿ ಜಮೈಕಾದ ಟೋನಿ ಆ್ಯನ್ ಸಿಂಗ್ ಅವರು ಪೋಲ್ಯಾಂಡ್ ನ ಕರೋಲಿನಾ ಬಿಲಾವಸ್ಕ್ ಗೆ ಕಿರೀಟ ತೊಡಿಸಿದರು.

ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ ಶ್ರೀ ಸೈನಿ ಮೊದಲ ರನ್ನರ್ ಅಪ್ ಎನಿಸಿಕೊಂಡಿದ್ದು, ಕೋಟ್ ಡಿ ಐವರಿಯ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿರುವುದಾಗಿ ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!