August 25, 2026

ಮಲ್ಪೆಯ ಕಡಲ ತೀರದಲ್ಲಿ 304 ಕೋಟಿ ರೂ. ವೆಚ್ಚದಲ್ಲಿ ಮರಿನಾ ಬಂದರು ನಿರ್ಮಾಣ: ರಾಜ್ಯ ಸರಕಾರ

0
image_editor_output_image-712232961-1647494733180.jpg

ಬೆಂಗಳೂರು: ಉಡುಪಿ ಜಿಲ್ಲೆಯ ಮಲ್ಪೆಯ ಕಡಲ ತೀರದಲ್ಲಿ 304 ಕೋಟಿ ರೂ. ವೆಚ್ಚದಲ್ಲಿ ಮರಿನಾ ಹಾಗೂ ವಿವಿಧೋದ್ದೇಶ ಬಂದರು ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರಕಾರದ ಸಾಗರ ಮಾಲಾ ಕೋಶಕ್ಕೆ ಸಲ್ಲಿಸಲಾಗಿದೆ.

ಯೋಜನೆಗೆ ಅನುಮೋದನೆ ದೊರಕಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.

ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ವಿಧಾನಪರಿಷತ್ತಿನಲ್ಲಿ ಮಂಡಿಸಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.

ಈ ಯೋಜನೆಯಡಿ ದೇಶಿಯ ಮತ್ತು ವಿದೇಶಿ ಬೋಟ್‌ಗಳು ಮತ್ತು ಯಾಚ್‌ಗಳಿಗೆ ತಂಗಲು ತೇಲುವ ಜೆಟ್ಟುಗಳನ್ನು ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ.

ಪ್ರಸ್ತುತ ಈ ಯೋಜನೆ ಮೀನುಗಾರಿಕೆ ಬಂದರಿನಿಂದ ದಕ್ಷಿಣಕ್ಕೆ ಇರುವುದರಿಂದ ಮೀನುಗಾರಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ಪರಿಸರಕ್ಕೆ ತೊಂದರೆ ಉಂಟಾಗುವ ಬಗ್ಗೆ ಪರಿಸರ ಅಧ್ಯಯನ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!