August 21, 2026

ಅಂತಾರಾಷ್ಟ್ರೀಯ ಮೇಳದಲ್ಲಿ ಕಳ್ಳತನ: ನಟಿ ರೂಪಾ ದತ್ತಾ ಬಂಧನ

0
image_editor_output_image-352791394-1647234880707.jpg

ಕೋಲ್ಕತ್ತಾ: ಕೋಲ್ಕತ್ತಾ ಅಂತಾರಾಷ್ಟ್ರೀಯ ಮೇಳದಲ್ಲಿ ಗಮನ ಸೆಳದು ಕಳ್ಳತನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರೂಪಾ ದತ್ತಾ ಅವರನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ ರೂಪಾ ದತ್ತಾ, ಅವರು ಪರ್ಸ್ ವೊಂದನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ಪೊಲೀಸರೊಬ್ಬರು ನೋಡಿದ ನಂತರ ಶನಿವಾರ ಅವರನ್ನು ಬಂಧಿಸಲಾಗಿದೆ ಎಂದು ಬಿದಾನ್ ನಗರ್ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಬಂಧನದ ನಂತರ ವಿಚಾರಣೆ ವೇಳೆಯಲ್ಲಿ ಆಕೆ ನೀಡಿದ್ದ ಉತ್ತರಗಳು ಸಮರ್ಪಕವಾಗಿರಲಿಲ್ಲ. ಶೋಧನೆ ವೇಳೆ ಆಕೆಯ ಬ್ಯಾಗ್ ನಿಂದ ಅನೇಕ ಪರ್ಸ್ ಗಳು ಮತ್ತು 75 ಸಾವಿರ ರೂ. ನಗದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಗಮನ ಬೇರೆಡೆ ಸೆಳೆದು ಕಳ್ಳತನ ಆರೋಪದ ಮೇರೆಗೆ ನಟಿಯನ್ನು ಬಂಧಿಸಲಾಗಿದೆ.

ಈ ಅಪರಾಧದಲ್ಲಿ ಹೆಚ್ಚಿನ ಜನರು ತೊಡಗಿಸಿಕೊಂಡರಬಹುದೇ ಎಂಬುದನ್ನು ತಿಳಿಯಲು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.  ರೂಪಾ ದತ್ತಾ ಅವರು ಈ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ತಪ್ಪಾಗಿ ಲೈಂಗಿಕ ಕಿರುಕುಳ ಆರೋಪ ಮಾಡಿ ಸುದ್ದಿಯಾಗಿದ್ದರು. 

Leave a Reply

Your email address will not be published. Required fields are marked *

You may have missed

error: Content is protected !!