February 2, 2026

ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ: ಐವರು ಭಾರತೀಯ ವಿದ್ಯಾರ್ಥಿಗಳು ಮೃತ್ಯು, ಇನ್ನಿಬ್ಬರಿಗೆ ಗಾಯ

0
Screenshot_2022-03-14-10-06-12-92_680d03679600f7af0b4c700c6b270fe7.jpg

ಟೊರೊಂಟೊ: ಕೆನಡಾದ ಟೊರೊಂಟೊ ಬಳಿ ರಸ್ತೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಹೆದ್ದಾರಿ 401ರಲ್ಲಿ ಬೆಲ್ಲೆವಿಲ್ಲೆ ಮತ್ತೆ ಟ್ರೆಂಟನ್ ಬಳಿ ಅಪಘಾತ ಸಂಭವಿಸಿದೆ.

ಒಂಟಾರಿಯೊ ಪ್ರಾಂತೀಯ ಪೊಲೀಸ್‌ನ ಕ್ವಿಂಟೆ ವೆಸ್ಟ್ ಡಿಟ್ಯಾಚ್‌ಮೆಂಟ್ ಪ್ರಕಾರ, ಸುಮಾರು 3:45 ವೇಳೆಗೆ ಟ್ರಾಕ್ಟರ್-ಟ್ರೇಲರ್ ಮತ್ತು ಪ್ಯಾಸೆಂಜರ್ ವ್ಯಾನ್ ನಡುವಿನ ಅಪಘಾತ ಸಂಭವಿಸಿದೆ.

ಮೃತ ವಿದ್ಯಾರ್ಥಿಗಳನ್ನು ಹರ್‌ಪ್ರೀತ್ ಸಿಂಗ್ ( 24), ಜಸ್ಪಿಂದರ್ ಸಿಂಗ್ (21), ಕರಣ್‌ಪಾಲ್ ಸಿಂಗ್( 22), ಮೋಹಿತ್ ಚೌಹಾನ್ ( 23), ಮತ್ತು ಪವನ್ ಕುಮಾರ್ (23) ಎಂದು ಗುರುತಿಸಲಾಗಿದೆ.

ಐವರೂ ಮಾಂಟ್ರಿಯಲ್ ಮತ್ತು ಗ್ರೇಟರ್ ಟೊರೊಂಟೊ ಏರಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಟ್ವಿಟರ್‌ನಲ್ಲಿ ಕೆನಡಾದ ಹೈಕಮಿಷನ್ ಅವರು ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ಟೊರೊಂಟೆದಲ್ಲಿರುವ ಭಾರತದ ತಂಡವು ಸಹಾಯಕ್ಕಾಗಿ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!