July 6, 2026

ಉಡುಪಿ: ಸಿರಪ್ ಎಂದು ಭಾವಿಸಿ ಇಲಿ ಪಾಷಾಣ ಸೇವಿಸಿದ ಮಹಿಳೆ ಸಾವು!

0
IMG_20220312_161723.jpg

ಬ್ರಹ್ಮಾವರ: ಸಿರಪ್ ಎಂದು ಭಾವಿಸಿ ಇಲಿ ಪಾಷಾಣ ಸೇವಿಸಿದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪೆಜಮಂಗೂರು ಗ್ರಾಮದ ಗುಂಡಾಲು ಎಂಬಲ್ಲಿ ಸಂಭವಿಸಿದೆ.

ಇಲ್ಲಿನ ಶೀನ ನಾಯ್ಕ ಎಂಬವರ ಪತ್ನಿ ದೇವಕಿ(47) ಮೃತ ದುರ್ದೈವಿಯಾಗಿದ್ದಾರೆ. ದೇವಕಿ ಅವರು ಸಿರಪ್ ಬಾಟಲಿಯಲ್ಲಿದ್ದ ಇಲಿ ಪಾಷಾಣವನ್ನು ಕೆಮ್ಮುವಿನ ಸಿರಪ್ ಎಂದು ಭಾವಿಸಿ ಕುಡಿದಿದ್ದರು. ಅಸ್ವಸ್ಥಗೊಂಡ ಮಹಿಳೆಗೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!