February 2, 2026

ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಲ್ಲಿ ಬೈಕ್ ಸ್ಟಂಟ್: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು

0
Screenshot_2022-03-12-10-37-06-13_680d03679600f7af0b4c700c6b270fe7.jpg

ಮಂಗಳೂರು: ಬೈಕ್ ಸ್ಟಂಟ್ ಹಾಗೂ ವಿಲೀಂಗ್ ಸ್ಟಂಟ್ ಮಾಡಿದ ಹಿನ್ನೆಲೆಯಲ್ಲಿ ಆರು ಮಂದಿಯ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲ್ಯಾಸ್ ಝಿಯಾನ್ ಎಂಬಾತ ಮಾ.1ರಿಂದ 6ರವರೆಗೆ ನೋಂದಣಿ ಸಂಖ್ಯೆ ಇಲ್ಲದ ಬೈಕ್‌ನಲ್ಲಿ ಇಬ್ಬರನ್ನು ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಿಂದ ಉಳ್ಳಾಲಬೈಲ್‌ವರೆಗೆ ಹಾಗೂ ನಾಗುರಿಯಿಂದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯವರೆಗೆ ವಿಲೀಂಗ್ ಸ್ಟಂಟ್ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಇತರ ವಾಹನಗಳು, ಪಾದಚಾರಿಗಳಿಗೆ ಅಪಾಯ ಉಂಟಾಗುವ ರೀತಿಯಲ್ಲಿ ಸವಾರಿ ಮಾಡುತ್ತಿದ್ದ.

ಈ ಕುರಿತಾದ ವೀಡಿಯೋವನ್ನು ಮಾ.10ರಂದು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ. ಇದು ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಪೊಲೀಸರು ಇಲ್ಯಾಸ್, ಬೈಕ್ ಮಾಲಕ ಮತ್ತು ವಿಲೀಂಗ್ ಸ್ಟಂಟ್‌ನ್ನು ವೀಡಿಯೊ ಮಾಡಿದ್ದ ಸಫ್ವಾನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರ ಹೊರವಲಯದ ಅಡ್ಯಾರ್ ಸಮೀಪ ಮಾ.10ರಂದು ಬೈಕ್‌ನಲ್ಲಿ ವಿಲೀಂಗ್ ಮಾಡುತ್ತಿದ್ದ ಆರೋಪದ ಮೇರೆಗೆ ಕಿಶನ್ ಶೆಟ್ಟಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ವೀಡಿಯೋ ಕೂಡ ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *

error: Content is protected !!