February 2, 2026

ಮಲ್ಪೆ ಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಗರಗಸ (ಸಾಫಿಶ್‌) ಮೀನು

0
image_editor_output_image1799074160-1646977439875.jpg

ಉಡುಪಿ: ಮಲ್ಪೆ ಸಮುದ್ರದಲ್ಲಿ ಈಚೆಗೆ ಮೀನುಗಾರರ ಬಲೆಗೆ ಅಳಿವಿನಂಚಿನಲ್ಲಿರುವ ಪ್ರಬೇಧವಾಗಿರುವ ಗರಗಸ (ಸಾಫಿಶ್‌) ಮೀನು ಬಿದ್ದಿದೆ.

10 ಅಡಿ ಉದ್ದ ಹಾಗೂ 100 ಕೆ.ಜಿಗೂ ಹೆಚ್ಚು ತೂಕವಿರುವು ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿವೆ. ’ಪ್ರಿಸ್ಟಿಸ್‌ ಪ್ರಿಸ್ಟಿಸ್‌‘ ಮೀನಿನ ವೈಜ್ಞಾನಿಕ ಹೆಸರಾಗಿದ್ದು, ಮೂರು ಪ್ರಬೇಧಗಳನ್ನು ಕಾಣಬಹುದು.

ಒಂದು ಪ್ರಬೇಧ ಸಿಹಿನೀರು, ಅಳಿವೆ ಹಾಗೂ ಸಮುದ್ರದಲ್ಲಿ ಹಾಗೂ ಉಳಿದ ಎರಡು ಪ್ರಬೇಧಗಳು ಸಮುದ್ರ ಹಾಗೂ ಅಳಿವೆಯಲ್ಲಿ ಮಾತ್ರ ಕಾಣಸಿಗುತ್ತವೆ ಎಂದು ಕರ್ನಾಟಕ ವಿವಿ ಕಡಲ ಜೀವಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದರು.

ಸಮಶೀತೋಷ್ಣ ಹಾಗೂ ಉಷ್ಣವಲಯದ ಸಮುದ್ರಗಳಲ್ಲಿ ಕಾಣಿಸಿಕೊಳ್ಳುವ ಮೀನು ಅಳಿವಿನಂಚಿನಲ್ಲಿರುವ ಕಾರಣ ಶೆಡ್ಯೂಲ್ ಒಂದಕ್ಕೆ ಸೇರಿಸಲಾಗಿದೆ. ಮೀನಿನ ಬೇಟೆ ನಿಷಿದ್ಧವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ.

Leave a Reply

Your email address will not be published. Required fields are marked *

error: Content is protected !!