February 1, 2026

ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಮಾರಾಟ: ಪ್ರೇಮಿಗಳಿಬ್ಬರ ಬಂಧನ

0
Screenshot_2022-03-10-11-51-37-00_680d03679600f7af0b4c700c6b270fe7.jpg

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ಸ್‌ ದಂಧೆಯಲ್ಲಿ ತೊಡಗಿಸುತ್ತಿದ್ದ ಕೇರಳ ಪ್ರೇಮಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೇರಳ ಮೂಲದ ಸಿಗಿಲ್‌ ವರ್ಗೀಸ್‌ ಮತ್ತು ವಿಷ್ಣುಪ್ರಿಯಾ ಎಂಬವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 8 ಕೋಟಿ ರೂ. ಮೌಲ್ಯದ ಹ್ಯಾಶಿಸ್‌ ಆಯಿಲ್‌, ಗಾಂಜಾ ವಶಕ್ಕೆ ಪಡೆಯಲಾಗಿದೆ. ವಿಷ್ಣುಪ್ರಿಯಾ ಕೇರಳದಿಂದ ಕೊಯಮತ್ತೂರಿಗೆ ಸ್ಥಳಾಂತರಗೊಂಡಿದ್ದರು. ಹೀಗಾಗಿ ವಿದ್ಯಾಭ್ಯಾಸವನ್ನು ಕೊಯಮತ್ತೂರಿನಲ್ಲಿ ನಡೆಸಿದ್ದಳು.

ಇನ್ನು ಪಿಯುಸಿ ಮುಗಿದ ಬಳಿಕ ಸಿಗಿಲ್‌ ಕೂಡ ಕೊಯಮತ್ತೂರಿಗೆ ಹೋಗಿದ್ದ. ಈ ವೇಳೆ ಇಬ್ಬರೂ ಪರಸ್ಪರ ಭೇಟಿಯಾಗಿದ್ದು, ಆತ್ಮೀಯತೆ ಹೆಚ್ಚಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.

Leave a Reply

Your email address will not be published. Required fields are marked *

error: Content is protected !!