ಸುಳ್ಯ ಯೋಗಾಸನ ಸ್ಪರ್ಧೆಯಲ್ಲಿ ಹಾರ್ದಿಕ ಕೆರೆಕ್ಕೋಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಸುಳ್ಯ: ಹಾವೇರಿ ಜಿಲ್ಲಾ ಯೋಗ ಅಸೋಸಿಯೇಷನ್ ನಡೆಸಿದ 40ನೇ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ 2022 ನೇ ಸಾಲಿನ ಯೋಗಾಸನ ಸ್ಪರ್ಧೆಯಲ್ಲಿ ಒಟ್ಟು 83 ವಿದ್ಯಾರ್ಥಿಗಳೂ ಭಾಗವಹಿಸಿ ಯೋಗೇನ ಚಿತ್ತಸ್ಯ ಸುಳ್ಯ ತಂಡದ ಹಾರ್ದಿಕ ಕೆ.ಕೆ. ಇವರು 8 ರಿಂದ 14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದು ದೆಹಲಿಯ ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ದೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.
ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗ ಶಿಕ್ಷಕ ಸಂತೋಷ್ ಮುಂಡಕಜೆಯವರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ.




