ತಾರೆಯಾಗಿ ಬದಲಾದ ಬಲೂನ್ ಮಾರುತ್ತಿದ್ದ ಯುವತಿ
ತಿರುವನಂತಪುರಂ: ಇತ್ತೀಚೆಗೆ ಕೇರಳದ ಕೋಝಿಕ್ಕೋಡ್‌ನ ದಿನಗೂಲಿ ನೌಕರನೊಬ್ಬ ಮಾಡೆಲ್ ಆಗಿದ್ದ ಸುದ್ದಿ ಹಲವಾರು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಈಗ, ಕೇರಳದ ಕಣ್ಣೂರು ಜಿಲ್ಲೆಯ ಅಂದಲೂರು ಕಾವು ದೇವಸ್ಥಾನದ ಜಾತ್ರೆಯೊಂದರಲ್ಲಿ ಬೆಲೂನ್ ಮಾರುತ್ತಿದ್ದ ಹುಡುಗಿಯೊಬ್ಬಳು ಮಾಡೆಲ್ ಆಗಿ ಹೊರಹೊಮ್ಮಿರುವ ಸುದ್ದಿಯೊಂದು ಹೊರಬಿದ್ದಿದೆ.
ಇದಕ್ಕೆ ಕಾರಣ ಸಾಮಾಜಿಕ ತಾಣದಲ್ಲಿ ಪ್ರಕಟವಾದ ಆಕೆಯ ಚಿತ್ರಗಳು! ಜ.17ರಂದು ಕಿಸುº ಎಂಬ ಹುಡುಗಿ ಬಲೂನು ಮಾರಾಟ ಮಾಡುತ್ತಿದ್ದಳು. ಆಕೆಯ ವಿಶೇಷ ಮುಖಚರ್ಯೆಯನ್ನು ಗಮನಿಸಿದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಆಕೆಯ ಚಿತ್ರಗಳನ್ನು ತೆಗೆದುಕೊಂಡರು. ನಂತರ ಪೋಷಕರ ಅನುಮತಿ ಪಡೆದು ಫೋಟೋಶೂಟ್ ನಡೆಸಿದರು. ಈ ವೇಳೆ ಆಕೆಯ ರೂಪವೇ ಬದಲಾಗುವಂತೆ ವಿಶೇಷವಾಗಿ ಅಲಂಕರಿಸಲಾಗಿತ್ತು.
ಹಳೆಯ ಚಿತ್ರ ಹಾಗೂ ಬದಲಾದ ಚಿತ್ರ ನೋಡಿದ ನೆಟ್ಟಿಗರು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ. ರಾತ್ರೋರಾತ್ರಿ ಅಪರಿಚಿತ ಹುಡುಗಿ, ತಾರೆಯಾಗಿ ಬದಲಾಗಿದ್ದಾಳೆ.




