March 22, 2026

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮದ್ರಸ ಅಧ್ಯಾಪಕನಿಗೆ ಶಿಕ್ಷೆ, 3 ಲಕ್ಷ ರೂ. ದಂಡ

0
Screenshot_2022-03-10-10-02-33-92_680d03679600f7af0b4c700c6b270fe7.jpg

ಕಾಸರಗೋಡು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮದ್ರಸ ಅಧ್ಯಾಪಕನಿಗೆ ಶಿಕ್ಷೆ ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ಕಾಸರಗೋಡು ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.

ಬಂಟ್ವಾಳ ಮೂಲದ ಅಬ್ದುಲ್ ಮಜೀದ್ ಲತೀಫ್(45) ಶಿಕ್ಷೆಗೊಳಗಾದವನು. 2016 ರ ಜನವರಿ 21ರಂದು ಕೃತ್ಯ ಬೆಳಕಿಗೆ ಬಂದಿತ್ತು. ಏಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ಲಭಿಸಿತ್ತು. ದೂರು ಲಭಿಸಿದ ಹಿನ್ನಲೆಯಲ್ಲಿ ಪೊಲೀಸರು ಅಬ್ದುಲ್ ಮಜೀದ್ ವಿದುದ್ದ ಸಾಕ್ಷ್ಯ ಕಲೆ ಹಾಕಿ ಈತನನ್ನು ಬಂಧಿಸಿತ್ತು.

ಪ್ರಕರಣದಲ್ಲಿ 15 ಸಾಕ್ಷಿಗಳು ಹಾಗೂ 14 ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಹಾಜರು ಪಡಿಸಿತ್ತು. ಇದೀಗ ವಿಚಾರಣೆ ಬಳಿಕ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!