March 22, 2026

ಕಟಪಾಡಿ: ರೈಲ್ವೆ ಹಳಿಯಲ್ಲಿ ಅಪರಿಚಿತನ ಮೃತದೇಹ ಪತ್ತೆ

0
Screenshot_2022-03-09-15-28-34-19_680d03679600f7af0b4c700c6b270fe7.jpg

ಕಟಪಾಡಿ: ಉದ್ಯಾವರ ಬೊಲ್ಜೆ ಎಂಬಲ್ಲಿ ರೈಲ್ವೆ ಹಳಿಯಲ್ಲಿ ರೈಲು ಢಿಕ್ಕಿ ಹೊಡೆದ ಸ್ಥಿತಿ ಯಲ್ಲಿ ಅಪರಿಚಿತನೋರ್ವನ ಶವವು ಕಂಡು ಬಂದಿರುತ್ತದೆ.

ಬುಧವಾರ ಮಧ್ಯಾಹ್ನದ 2 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿರಬಹುದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ದೇಹ ಛಿದ್ರಗೊಂಡು ಗುರುತು ಹಿಡಿಯಲಾರದಂತಾಗಿದೆ. ಮೃತ ವ್ಯಕ್ತಿ ಗುರುತು ಪತ್ತೆ ಹಚ್ಚಲಾಗುತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!