March 22, 2026

ಪ್ರಯಾಣಿಕರ ಮೇಲೆ ಹರಿದ ಎಕ್ಸ್ಪ್ರೆಸ್ ರೈಲು: ಓರ್ವ ಮೃತ್ಯು, ಇಬ್ಬರು ಗಾಯ

0
image_editor_output_image1323023264-1646814698865.jpg

ಕೋಲಾರ: ಪ್ರಯಾಣಿಕರ ಮೇಲೆ ಎಕ್ಸ್ಪ್ರೆಸ್ ರೈಲು ಹರಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ಕೋಲಾರ ರೈಲ್ವೇ ನಿಲ್ದಾಣದಲ್ಲಿ ಬುಧವಾರ ನಡೆದಿದೆ.

ಕೋಲಾರದ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ರೈಲು ಇಳಿದು ಹಳಿ ಮೇಲೆ ಪ್ರಯಾಣಿಕರು ನಿಂತಿದ್ದ ವೇಳೆ ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ವೇಗವಾಗಿ ನುಗ್ಗಿ ಬಂದು ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆಯೇ ಹರಿದಿದೆ. ಪ್ರಯಾಣಿಕರು ಪಾರಾಗಲು​ ಯತ್ನಿಸಿದ್ದರಾದರೂ ಓರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಲೋಕೋ ಪೈಲಟ್ ಸತತವಾಗಿ ಹಾರ್ನ್ ಮಾಡುತ್ತಿದ್ದರೂ ಜನ ಹಳಿಯಿಂದ ಕದಲದ ಕಾರಣ ದುರಂತ ಸಂಭವಿಸಿದೆ ಎನ್ನಲಾಗಿದೆ.

ಟೇಕಲ್ ಹೊರಠಾಣೆ, ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!