March 22, 2026

ಮಂಗಳೂರು ನಗರ ಸೇರಿದಂತೆ ಸುತ್ತಮುತ್ತಲೂ ಜೋರಾಗಿ ಸುರಿದ ಮಳೆ

0
image_editor_output_image-1643405414-1646802709475.jpg

ಮಂಗಳೂರು:  ಮಂಗಳೂರು ನಗರ ಸೇರಿದಂತೆ ಸುತ್ತಮುತ್ತಲೂ ಮಾ. 09 ರ ಬುಧವಾರ ಬೆಳಗ್ಗೆ ಏಕಾಏಕಿ ಜೋರಾಗಿ ಮಳೆ ಸುರಿದಿದೆ.

ಬುಧವಾರ ನಸುಕಿನ ಜಾವ ಎರಡು ಗಂಟೆಯಿಂದಲೇ ತಕ್ಕ ಮಟ್ಟಿಗೆ ಮಳೆ ಸುರಿಯುತ್ತಿದ್ದು, ಬಳಿಕ ಸುಮಾರು ಐದು ಗಂಟೆಯಿಂದ ಮುಂಜಾನೆ 7 ರವರೆಗೆ ಜೋರಾಗಿ ಮಳೆ ಸುರಿದಿದೆ. ನಗರ ಸೇರಿ ದ.ಕ. ಜಿಲ್ಲೆಯ ಹಲವೆಡೆ ಮೋಡಕವಿದ ವಾತಾವರಣ ಮುಂದುವರಿದೆ.

ಕರಾವಳಿಯಲ್ಲಿ ತಾಪಮಾನ ಹೆಚ್ಚಿದ್ದು, ಮಂಗಳವಾರವೂ ಬಿಸಿಲಿನ ಪ್ರಖರತೆ ಅತೀ ಹೆಚ್ಚಾಗಿತ್ತು. ಇನ್ನು ಕಡಬ , ಸುಳ್ಯ ತಾಲೂಕಿನ ಅಲ್ಲಲ್ಲಿ ಮಂಗಳವಾರ ಸಂಜೆ ಮಳೆಯಾಗಿದೆ. ಅಂಗಳದಲ್ಲಿದ್ದ ಅಡಿಕೆಯೂ ಒಣಗುವ ಹಂತದಲ್ಲಿರುವಾಗಲೇ ಮಳೆ ಸುರಿದಿದ್ದರಿಂದ ಕೃಷಿಕರು ಪರದಾಡುವಂತಾಗಿದೆ

Leave a Reply

Your email address will not be published. Required fields are marked *

error: Content is protected !!