July 6, 2026

ಪೆಟ್ರೋಲ್, ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 15 ರೂ. ಹೆಚ್ಚಳ ಸಾಧ್ಯತೆ: NDTV ವರದಿ

0
image_editor_output_image369983134-1646720168110.jpg

ನವ ದೆಹಲಿ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಿರವಾಗಿದ್ದ ಇಂಧನ ಬೆಲೆಯು ಈಗ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.

ಚುನಾವಣೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಳಿತವಾಗಿದ್ದು, ಅದನ್ನು ಸರಿದೂಗಿಸಲು ಮುಂದಿನ ದಿನಗಳಲ್ಲಿ ಕಂಪನಿಗಳು ಮುಂದಾಗಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಅಂತಾರಾಷ್ಟ್ರೀಯ ತೈಲ ಬೆಲೆಗಳು ಈ ವಾರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ಬ್ಯಾರೆಲ್‌ಗೆ 140 ಡಾಲರ್‌ ಆಗಲಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ₹ 15 ಹೆಚ್ಚಿಸಬೇಕಾಗಬಹುದು ಎಂದು ಉದ್ಯಮದ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಅಮೆರಿಕ ತೈಲ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್‌ನಲ್ಲಿ ಭಾನುವಾರ ಸಂಜೆ ಪ್ರತಿ ಬ್ಯಾರೆಲ್‌ಗೆ 130.50 ಡಾಲರ್‌‌ ಬೆಲೆ ಏರಿಕೆಯಾಯಿತು. ಜುಲೈ 2008ರಲ್ಲಾದ ಏರಿಕೆಯೇ ಇದುವರೆಗೆ ಅಧಿಕ ಎನ್ನಲಾಗಿತ್ತು. ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕ್ರೂಡ್‌ನಲ್ಲಿ ಒಂದು ಬ್ಯಾರೆಲ್‌ ಇಂಧನ ಬೆಲೆ ರಾತ್ರೋರಾತ್ರಿ 139.13 ಡಾಲರ್‌ ಮುಟ್ಟಿತು. ಜುಲೈ 2008ರಲ್ಲಾದ ಏರಿಕೆಯ ಬಳಿಕ ಇದೇ ಮೊದಲ ಭಾರಿಗೆ ಅತಿ ಹೆಚ್ಚು ಏರಿಕೆ ಕಂಡಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!