May 17, 2026

ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಮಿಲಿಟರಿ ಸೇರಿದ ತಮಿಳುನಾಡಿನ ವಿದ್ಯಾರ್ಥಿ

0
image_editor_output_image-1684939870-1646718575002.jpg

ಚೆನ್ನೈ: ತಮಿಳುನಾಡಿನ ವಿದ್ಯಾರ್ಥಿಯೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಮಿಲಿಟರಿ ಸೇರಿರುವುದು ಬೆಳಕಿಗೆ ಬಂದಿದೆ.

ಕೊಯಮತ್ತೂರು ಜಿಲ್ಲೆಯ 21 ವರ್ಷದ ವಿದ್ಯಾರ್ಥಿ ಸೈನಿಕೇಶ್ ರವಿಚಂದ್ರನ್ ಅವರು, ಉಕ್ರೇನ್‌ನ ಪ್ಯಾರಾ ಮಿಲಿಟರಿ ಪಡೆ ಸೇರಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

2018ರಲ್ಲಿ ಸೈನಿಕೇಶ್ ಹಾರ್ಕಿವ್‌ನ ನ್ಯಾಶನಲ್ ಏರೊಸ್ಪೇಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿದ್ದರು. ಈ ವರ್ಷದ ಜುಲೈಗೆ ಅವರು ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು.

ಉಕ್ರೇನ್ ಮತ್ತು ರಷ್ಯಾ ಸಂಘರ್ಷ ತೀವ್ರಗೊಂಡಿದ್ದು, ಪೋಷಕರು ಸೈನಿಕೇಶ್ ಜೊತೆಗಿನ ಸಂಪರ್ಕ ಕಳೆದುಕೊಂಡಿದ್ದಾರೆ. ಹೀಗಾಗಿ, ಪೋಷಕರು ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಬಳಿಕ, ಅಧಿಕಾರಿಗಳು ವಿದ್ಯಾರ್ಥಿಯನ್ನು ಸಂಪರ್ಕಿಸಿದಾಗ, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ನ ಪ್ಯಾರಾಮಿಲಿಟರಿ ಪಡೆ ಸೇರಿರುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಅಧಿಕಾರಿಗಳು ವಿದ್ಯಾರ್ಥಿಯ ಪೋಷಕರ ಬಳಿ ಮಾತನಾಡಿದಾಗ ಆತ ಭಾರತೀಯ ಸೇನೆ ಸೇರಲು ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿದ್ದ ಬಗ್ಗೆ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!