ಸುಳ್ಳು ಆರೋಪ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಂತೆ ಬಿ.ರಮಾನಾಥ ರೈಯವರಿಂದ ಪಣೋಲಿಬೈಲು ಕ್ಷೇತ್ರದಲ್ಲಿ ಪ್ರಾರ್ಥನೆ
ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈಯವರು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ, ತನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ತಾಯಿ ಕಲ್ಲುರ್ಟಿಯು ಕಠಿಣ ಶಿಕ್ಷೆ ನೀಡುವಂತೆ ಪ್ರಾರ್ಥನೆ ಸಲ್ಲಿಸಿದರು.
ನಾಲ್ಕು ವರ್ಷಗಳ ಹಿಂದೆ ಬಂಟ್ವಾಳ ತಾಲ್ಲೂಕಿನ ಸಜಿಪ ಗ್ರಾಮದಲ್ಲಿ ಶರತ್ ಮಡಿವಾಳ ಎಂಬವರ ಹತ್ಯೆಯಾಗಿದ್ದು ನಿಜವಾದ ಹಂತಕರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಅವರು ಶರತ್ ಹತ್ಯೆಯನ್ನು ಮಾಡಿದ್ದು ರಮಾನಾಥ ರೈಯವರು ಎಂದು ನೇರ ಆರೋಪ ಮಾಡಿದ್ದರು.
ಇದರಿಂದ ರೈಯವರ ಮನಸ್ಸಿಗೆ ಅಘಾ ತವಾಗಿದ್ದು ಅಲ್ಲದೇ ಇದು ರಾಜಕೀಯ ಪ್ರೇರಿತ ಸುಳ್ಳು ಆರೋಪ ಮತ್ತು ಪ್ರಕರಣ ವಿಚಾರಣೆ ನಡೆಯುತ್ತಿರುವುದರಿಂದ ಅದರ ದಿಕ್ಕನ್ನು ತಪ್ಪಿ ಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಬಿ.ರಮಾನಾಥ ರೈಯವರು ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ಮಾಡಿ ಕ್ಷೇತ್ರದ ಅಮ್ಮನವರಲ್ಲಿ ಹರಿಕೆ ಮಾಡಿ ಶರತ್ ಮಡಿವಾಳರ ಹತ್ಯೆಯಲ್ಲಿ ನನ್ನ ಕೈವಾಡ ಇದ್ದರೆ ನನಗೆ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಯಾರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಾರೆ ಅವರಿಗೆ ಕ್ಷೇತ್ರದ ತಾಯಿ ಕಠಿಣ ಶಿಕ್ಷೆ ನೀಡುವಂತೆ ಪ್ರಾರ್ಥಿಸಿದರು.