ಹಿಜಾಬ್ ಧರಿಸುವ ಕುರಿತಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕಿ ಸುರಯ್ಯಗೆ ಜೀವ ಬೆದರಿಕೆ
ಮಂಗಳೂರು: ಹಿಜಾಬ್ ಧರಿಸುವ ಕುರಿತಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕಿ ಸುರಯ್ಯ ಅಂಜುಮ್ ಅವರಿಗೆ ಅಪರಿಚಿತರು ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೀಡಿಯೋ ಮೂಲಕ ಹಿಜಾಬ್ ಧರಿಸಲು ಒತ್ತಾಯಿಸುವ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಸೂರಯ್ಯ, ಧರ್ಮಕ್ಕಿಂತ ದೇಶ ಮೊದಲು,ಶಿಕ್ಷಣಕ್ಕಿಂತ ಶ್ರೇಷ್ಠವಾದ ಧರ್ಮ ಯಾವುದಾದರೂ ಇರಲು ಸಾಧ್ಯವೇ ? ಶಾಲಾ ಕಾಲೇಜು ಗಳಲ್ಲಿ ಸಮವಸ್ತ್ರ ಧರಿಸಿ ಸಮಾನತೆ ಕಾಪಾಡಬೇಕು ಎಂದು ಸಲಹೆ ನೀಡಿದ್ದರು.
ಕೆಲವು ದಿನಗಳ ನಂತರ, ಅಪರಿಚಿತರಿಂದ ಫೋನ್ ಮತ್ತು ವೀಡಿಯೋ ಮೂಲಕ ಬೆದರಿಕೆಗಳು ಮತ್ತು ನಿಂದನೀಯ ಪದಬಳಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ ಗಳಿಂದ ಮಾನಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ವೈರಲ್ ಮಾಡಲಾಗಿದ್ದು ತನಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ