March 22, 2026

ವಿಟ್ಲ ಪ.ಪಂಚಾಯತ್ ಮುಖ್ಯಾಧಿಕಾರಿ ಕೋಟೆಕಾರಿಗೆ ವರ್ಗಾವಣೆ: ವಿಟ್ಲದಲ್ಲಿ ಎಲ್ಲ ಅಧಿಕಾರಿಗಳ ಹುದ್ದೆ ಖಾಲಿ!

0
IMG_20220224_223308.jpg

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಗೆ ಮತ್ತೆ ಗ್ರಹಣ ಹಿಡಿದಂತಾಗಿದೆ. ಖಾಲಿ ಇದ್ದಂತಹ ಒಂದು ಹುದ್ದೆಯೂ ಇದೀಗ ಖಾಲಿಯಾಗಿದೆ.

ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಲಿನಿ ಅವರನ್ನು ಕೋಟೆಕಾರ್ ಪಟ್ಟಣ ಪಂಚಾಯತ್ ಗೆ ವರ್ಗಾವಣೆಯಾಗಿದೆ. ಅಲ್ಲಿ ಮುಖ್ಯಾಧಿಕಾರಿ ಮಾಲಿನಿ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೆಚ್ಚುವರಿ ಪ್ರಭಾರ ಜವಾಬ್ದಾರಿಯಲ್ಲಿದ್ದಾರೆ.

ವಿಟ್ಲ ಪ.ಪಂ.ಮುಖ್ಯಾಧಿಕಾರಿ ಹುದ್ದೆಯೊಂದು ಬಿಟ್ಟರೆ ಉಳಿದೆಲ್ಲವೂ ಖಾಲಿಯೇ ಆಗಿತ್ತು. ಕಳೆದ ಆರೇಳು ವರ್ಷಗಳಿಂದ ವಿಟ್ಲ ಪ.ಪಂ.ಸ್ಥಿತಿ ಶೋಚನೀಯವೇ ಆಗಿತ್ತು. ಈಗ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಇದರಿಂದ ಜನರು ಆತಂಕಪಡುವಂತಾಗಿದೆ.

ಕಂದಾಯ ಅಧಿಕಾರಿ, ಎಂಜಿನಿಯರ್, ಆರೋಗ್ಯಾಧಿಕಾರಿ ಹುದ್ದೆಗಳು ಖಾಲಿಯಾಗಿವೆ. ಮೊದಲಿನಿಂದಲೇ ಆರೋಗ್ಯಾಧಿಕಾರಿ ಹುದ್ದೆ ಖಾಲಿಯಾಗಿತ್ತು. ಮುಖ್ಯಾಧಿಕಾರಿ ಹುದ್ದೆ ಮಾತ್ರ ನಿನ್ನೆವರೆಗೆ ಭರ್ತಿಯಾಗಿತ್ತು. ಇಂದಿನಿಂದ ಅದೂ ಪ್ರಭಾರ ಜವಾಬ್ದಾರಿಯಲ್ಲಿ ನಡೆಯುವಂತಾಗಿದೆ.

ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ಮೀಸಲಾತಿ ಬಾರದ ಕಾರಣ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಅಧಿಕಾರ ನಡೆಸಲು ಕಷ್ಟವಾಗಿದೆ. ನಾಗರಿಕರು ತಮ್ಮ ಆವಶ್ಯಕತೆಗಳನ್ನು ಪೂರೈಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಈ ನಡುವೆ ಸಿಬ್ಬಂದಿಗಳ ಕಡಿತ ಭಾರೀ ಹೊಡೆತವನ್ನು ನೀಡಲಿದೆ. ಈ ತನಕ ಪ್ರತೀದಿನ ಮುಖ್ಯಾಧಿಕಾರಿ ಹಾಜರಾಗಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಸ್ವಲ್ಪ ಮಟ್ಟಿಗೆಯಾದರೂ ಜನರ ಕೆಲಸ ಕಾರ್ಯಗಳು ನಡೆಯುತ್ತಿತ್ತು. ಎಲ್ಲ ಅಧಿಕಾರಿಗಳ ಜವಾಬ್ದಾರಿಯನ್ನು ಅವರೊಬ್ಬರು ಮಾನವೀಯತೆ ದೃಷ್ಟಿಯಲ್ಲಿ ನಿಭಾಯಿಸುತ್ತಿದ್ದರು. ಇನ್ನೂ ಅದೂ ಇಲ್ಲ ಎಂದು ನಾಗರಿಕರು ಆಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!