March 22, 2026

ಬಟ್ಟೆ‌, ಗೋಲ್ಡ್ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ

0
image_editor_output_image-339286466-1645692591851.jpg

ಶಿರಸಿ: ಗುರುವಾರ ಬೆಳಗಿನ ಜಾವ ನಗರದ ನಟರಾಜ್ ರಸ್ತೆಯಲ್ಲಿನ ಬಟ್ಟೆ‌ ಅಂಗಡಿ ಹಾಗೂ ಒನ್ ಗ್ರಾಮ್ ಗೋಲ್ಡ್ ಅಂಗಡಿಗೆ ಬೆಂಕಿ ಆಕಸ್ಮಿಕವಾಗಿ ಎರಡು ಅಂಗಡಿಗಳು ಸುಟ್ಟು ಕರಕಾಲದ ಘಟನೆ ನಡೆದಿದೆ.

ಪರ್ಲ್ ಬ್ಯುಟಿಕ್ ಹಾಗೂ ಮೇಘನಾ ಬಟ್ಟೆ‌ ಅಂಗಡಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ ಸುಮಾರು 30 ಲಕ್ಷ ರೂ. ಹಾನಿ‌ಸಂಭವಿಸಿದೆ ಎಂದರು ಅಂದಾಜಿಸಲಾಗಿದೆ.

ಗುರುವಾರ ಬೆಳಗಿನ ಜಾವ ಅಂಗಡಿಯ ಮೇಲ್ಬಾಗದ ಮನೆಯಲ್ಲಿ ಮಲಗಿದ್ದ ಮೇಘನಾ ಹಾಗೂ ಭಾರತಿ‌ ಮಡಿವಾಳ ಅವರಿಗೆ ಸುಟ್ಟ ವಾಸನೆ ಬಂದಿದೆ. ಈ ವೇಳೆ ಎದ್ದು ನೋಡಿದಾಗ ಕೆಳಗಿನ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಅಷ್ಟೋತ್ತಿಗಾಗಲೇ ಬೆಂಕಿ ಮೇಲಿನ ಅಂತಸ್ತಿಗೂ ಹಬ್ಬಿದೆ, ಕೂಡಲೇ ಇಬ್ಬರು ಮನೆಯಿಂದ ಹೊರ ಓಡಿಬಂದು ಜೀವ ಉಳಿಸಿಕೊಂಡಿದ್ದಾರೆ.

ಅಗ್ನಿ ಶಾಮಕ ದಳ ಹಾಗೂ ಅಕ್ಕ ಪಕ್ಕದ ಮನೆಯವರ ನೆರವಿನಿಂದ ಬೆಂಕಿ‌ ನಂದಿಸಲು ಸಾಧ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!