March 22, 2026

ರಷ್ಯಾ ಜೊತೆಗಿನ ಬಿಕ್ಕಟ್ಟು ಹಿನ್ನೆಲೆ: ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿದ ಉಕ್ರೇನ್

0
image_editor_output_image139626783-1645680533220.jpg

ವಾಷಿಂಗ್ಟನ್: ರಷ್ಯಾ ಜೊತೆಗಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದೆ. 

ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದಾರೆ.

ಪೂರ್ವ ಉಕ್ರೇನ್‌ನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನು ರಷ್ಯಾ ನಿಷೇಧಿಸಿದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ. 

ಕಳೆದ ವಾರ, ಇಲ್ಲಿನ ಪೈಲಟ್ ಗೆ ಎಚ್ಚರಿಕೆ ನೀಡಿದ್ದ ಉಕ್ರೇನ್ ವಾಯುಯಾನ ಅಧಿಕಾರಿಗಳು ವಾಯುಯಾನ ಪ್ರದೇಶಗಳ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ರಷ್ಯಾ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿರಿಸುವಂತೆ ಮತ್ತು ಉಕ್ರೇನ್ ನ ನಿಯಂತ್ರಕರನ್ನು ಮಾತ್ರ ಗುರುತಿಸುವಂತೆ ಎಚ್ಚರಿಕೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!