ಬಂಟ್ವಾಳ: ಚಿನ್ನದ ಬ್ರೇಸ್ ಲೈಟ್ ಪತ್ತೆ: ಕಳೆದುಕೊಂಡವರು ಬಂಟ್ವಾಳ ಪೊಲೀಸರನ್ನು ಸಂಪರ್ಕಿಸಿ
ಬಂಟ್ವಾಳ: ಬಿಸಿರೋಡು ಬಸ್ ನಿಲುಗಡೆಯ ರಸ್ತೆಯಲ್ಲಿ ಬಂಗಾರದ ಬ್ರೇಸ್ ಲೈಟ್ ಒಂದು ಬ್ಯಾಂಕ್ ಮ್ಯಾನೇಜರ್ ಓರ್ವನಿಗೆ ಬಿದ್ದು ಸಿಕ್ಕಿದ್ದು, ಅದನ್ನು ಅವರು ಬಂಟ್ವಾಳ ನಗರ ಠಾಣಾ ಎಸ್ .ಐ.ಅವಿನಾಶ್ ಅವರ ಕೈಗೆ ನೀಡಿದ್ದಾರೆ.
ಬಿಸಿರೋಡು ಸರ್ವೀಸ್ ರೋಡ್ ನಲ್ಲಿ ಮಂಗಳೂರು ಕಡೆಗೆ ತೆರಳುವ ಬಸ್ ನಿಲ್ಲುವ ಸ್ಥಳ ದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಮುಂಭಾಗದ ರಸ್ತೆಯಲ್ಲಿ ನಾವೂರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುವ ಹರೀಶ್ ಕುಲಾಲ್ ಕಾಮಾಜೆ ಅವರು ಕೆಲಸ ಮುಗಿಸಿ ಬರುವ ವೇಳೆ ಬಸ್ ನಿಂದ ಇಳಿಯುವ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಬ್ರೇಸ್ ಲೈಟ್ ನ್ನು ಸೀದಾ ನಗರ ಠಾಣೆಗೆ ತೆರಳಿ ಎಸ್.ಐ.ಅವಿನಾಶ್ ಅವರಲ್ಲಿ ನೀಡಿದ್ದಾರೆ.
ಅಂದಾಜು 1 ರಿಂದ 2 ಪವನ್ ತೂಕದ ಬ್ರೇಸ್ ಲೈಟ್ ನ ಕಳೆದುಕೊಂಡ ವ್ಯಕ್ತಿಗಳು ದಾಖಲೆ ನೀಡಿ ಅವರ ಕೈಯಿಂದ ಪಡೆಯಬಹುದು ಎಂದು ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ತಿಳಿಸಿದ್ದಾರೆ.




