ಸುಳ್ಯ: ಗ್ಯಾಸ್ ಮೇಲಿದ್ದ ಕುಕ್ಕರ್ ಸ್ಪೋಟ-ಅಪಾಯದಿಂದ ಪಾರು
ಸುಳ್ಯ: ಅಡುಗೆ ಮಾಡಲು ಗ್ಯಾಸ್ ಸ್ಟವ್ ಮೇಲಿಟ್ಟ ಕುಕ್ಕರ್ ಸ್ಪೋಟಗೊಂಡು ಗೃಹಣಿಯೊಬ್ಬರು ಅಪಾಯದಿಂದ ಪಾರಾದ ಘಟನೆ ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಕಳಂಜ ಗ್ರಾಮದ ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡಿದೆ. ಅವರ ಪತ್ನಿ ಸುಮಾ ವಿ. ಆಚಾರ್ಯ ಅಪಾಯದಿಂದ ಪಾರಾದ ಗೃಹಣಿ.
ನಿನ್ನೆ ಬೆಳಗ್ಗಿನ ಉಪಹಾರಕ್ಕೆ ಕುಕ್ಕರ್‌ನಲ್ಲಿ ಪಲಾವ್ ಇಟ್ಟಿದ್ದರು.
ಕುಕ್ಕರ್‌ನಲ್ಲಿ ಒಂದು ವಿಷಲ್ ಆಗುವಷ್ಟು ಹೊತ್ತಿಗೆ ಹೊರಗಿನಿಂದ ಯಾರೋ ಕರೆದ ಧ್ವನಿ ಕೇಳಿಸಿ ಹೊರಗೆ ಬಂದರೆನ್ನಲಾಗಿದೆ. ಈ ಹೊತ್ತಿನಲ್ಲಿ ಕುಕ್ಕರ್ ಸ್ಪೋಟಗೊಂಡು ಮೇಲ್ಛಾವಣಿಗೆ ತಾಗಿ ಹಾನಿಯಾಗಿದೆ. ಜೊತೆಗೆ ಗ್ಯಾಸ್‌ನ ಸ್ಟವ್‌ಗೆ ಹಾನಿಯಾಗಿದೆ.
ಜೊತೆ ಅದರ ಒಳಗಿದ್ದ ಆಹಾರ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕುಕ್ಕರ್ ನ ವಿಷಲ್ ಬರುವ ಭಾಗ ಸುಮಾರು 10 ಮೀಟರ್ ದೂರಕ್ಕೆ ಚಿಮ್ಮಿದೆ.




