February 3, 2026

ಬೆಂಗಳೂರು ವರ್ತುಲ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ

0
Screenshot_2022-02-18-10-50-30-06_680d03679600f7af0b4c700c6b270fe7.jpg

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಎಲ್ಲರಿಗೂ ಶಾಕ್ ಕೊಟ್ಟಿತ್ತು. ಅಪ್ಪು ಅಗಲಿ ತಿಂಗಳುಗಳೇ ಕಳೆದರೂ ಕೂಡ ಅವರ ನೆನಪು ಮಾತ್ರ ಮಾಸಿಲ್ಲ. ಅದ್ಭುತ ಕಲಾವಿದನನ್ನು ನೆನೆಯಲು ಇದೀಗ 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಅಧಿಕೃತ ಅನುಮೋದನೆ ಸಿಕ್ಕಿದೆ.‌

ಎರಡು ಲೋಕಸಭಾ ಕ್ಷೇತ್ರಗಳು, ಆರು ವಿಧಾನಸಭಾ ಕ್ಷೇತ್ರಗಳಿಗೆ ಹಾದುಹೋಗುವ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ  12 ಕಿ.ಮೀ. ಉದ್ದದ ವರ್ತುಲ ವೆಗಾಸಿಟಿ ಮಾಲ್ ಜಂಕ್ಷನ್​​ವರೆಗಿನ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣಕ್ಕೆ ಅನುಮೋದನೆ ನೀಡಲಾಗಿದೆ.

ಡಿಸೆಂಬರ್ 18 ರಂದು ಬಿಬಿಎಂಪಿಯು ಜಾಹೀರಾತು ಮೂಲಕ ಸಾರ್ವಜನಿಕ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಕೇಳಿತ್ತು. 700 ಕ್ಕೂ ಹೆಚ್ಚು ಜನರು ಮತ್ತು ಅನೇಕ ನಿವಾಸಿ ಕಲ್ಯಾಣ ಸಂಸ್ಥೆಗಳ ಸದಸ್ಯರು ಬಿಬಿಎಂಪಿಯ ಪ್ರಸ್ತಾಪವನ್ನು ಬೆಂಬಲಿಸಿದರು. ಆದರೆ, ಅಂಬರೀಷ್ ಅಭಿಮಾನಿ ಸಂಘದ ಕೆಲವು ಸದಸ್ಯರು ದಿವಂಗತ ರೆಬೆಲ್ ಸ್ಟಾರ್ ಅವರ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!