November 22, 2024

ಯುವತಿಯ ಅತ್ಯಾಚಾರ, ಹಲ್ಲೆ ವಂಚನೆ: ನಟನ ಬಂಧನ

0

ಬೆಂಗಳೂರು: ಅತ್ಯಾಚಾರ, ಹಲ್ಲೆ ಮತ್ತು ವಂಚನೆ ಆರೋಪ ಸಂಬಂಧ ನಟ ಶೇಷಗಿರಿ ಬಸವರಾಜ್‌ ಅವರನ್ನು ಮೈಸೂರಿನಲ್ಲಿ ಬಂಧಿಸಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನಗರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

‘ಬ್ಯಾಂಕ್‌ನಲ್ಲಿ ಕೆಲಸ ಕೊಡಿಸುವುದಾಗಿ ತನ್ನಿಂದ ಹಣ ಪಡೆದು ವಂಚಿಸಿರುವ ಶೇಷಗಿರಿ, ಅತ್ಯಾಚಾರವನ್ನೂ ಎಸಗಿದ್ದಾರೆ. ಹಲ್ಲೆ ಕೂಡ ನಡೆಸಿದ್ದಾರೆ’ ಎಂದು ಯುವತಿಯೊಬ್ಬರು ಹೋದ ತಿಂಗಳು ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಯು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ. ಕೆಲಸ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದುಕೊಂಡಿದ್ದ. ಹಣ ಹಿಂತಿರುಗಿಸುವಂತೆ ಯುವತಿ ಕೇಳಿದಾಗ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದ. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ದೂರವಾಣಿ ಕರೆಗಳ ಮಾಹಿತಿಯನ್ನು ಆಧರಿಸಿ ಆತನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!