March 21, 2026

ಇಂದು ಶೇರ ಬದ್ರಿಯಾ ಮಸ್ಜಿದ್ ನಲ್ಲಿ ಸಿಲ್ವರ್ ಜುಬಿಲಿ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮ

0
image_editor_output_image-1451122594-1644549188816

ಮಾಣಿ : ಇಲ್ಲಿನ ಸಮೀಪದ ಬುಡೋಲಿ ಬದ್ರಿಯಾ ಜುಮಾ ಮಸ್ಜಿದ್ ಮ‌ಆದನುಲ್ ಉಲೂಂ ಎಜ್ಯುಕೇಶನಲ್ ಸೆಂಟರ್ ಶೇರಾ ಇದರ ಸಿಲ್ವರ್ ಜುಬಿಲಿ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಇಂದು ಫೆಬ್ರವರಿ 11 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಶೇರಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಅಸ್ಸಯ್ಯಿದ್ ಮುಹ್ಸಿನ್ ಸೈದಲವಿ ಕೋಯ ಅಲ್ ಬುಖಾರಿ ತಂಙಳ್ ಕಲ್ಲೇರಿ ನೇತೃತ್ವ ವಹಿಸಲಿರುವ ಕಾರ್ಯಕ್ರಮದಲ್ಲಿ,ಅಬ್ದುಲ್ ಲತೀಫ್ ಸಅದಿ ಶೇರಾ ಸ್ವಾಗತ ಮಾಡುವರು,ಗಡಿಯಾರ್ ಜುಮಾ ಮಸೀದಿ ಖತೀಬ್ ಉಮರ್ ಫೈಝಿ ಕಾರ್ಯಕ್ರಮ ಉದ್ಘಾಟಿಸುವರು, ಎಸ್‌ವೈ‌ಎಸ್ ಮಾಣಿ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಅದಿ ಪಾಟ್ರಕೋಡಿ ಮುಖ್ಯ ಪ್ರಭಾಷಣ ಮಾಡುವರು,ಕಾರ್ಯಕ್ರಮದಲ್ಲಿ ಅಬ್ದುಲ್ ಜಲೀಲ್ ಸಖಾಫಿ ಮುಂಡಾಜೆ,ಹುಸೈನ್ ಹಾಜಿ ಶೇರಾ,ಅಬ್ದುರ್ರ‌ಹ್ಮಾನ್ ಮುಸ್ಲಿಯಾರ್ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿರುವರು ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!