May 18, 2026

ಮಾಜಿ ವ್ರೆಸ್ಲಿಂಗ್ ಸೂಪರ್ ಸ್ಟಾರ್ ದಿ ಗ್ರೇಟ್ ಖಲಿ ಬಿಜೆಪಿ ಗೆ ಸೇರ್ಪಡೆ

0
khali-joins-bjp.jpeg

ನವದೆಹಲಿ: ವೃತ್ತಿಪರ ಕುಸ್ತಿಪಟು, ಮಾಜಿ‌ ವ್ರೆಸ್ಲಿಂಗ್ ಸೂಪರ್ ಸ್ಟಾರ್ ದಿ ಗ್ರೇಟ್ ಖಲಿ ಗುರುವಾರ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ.

ವೃತ್ತಿಪರ ಕುಸ್ತಿಪಟು, ದಿ ಗ್ರೇಟ್ ಖಲಿ ಎಂದೂ ಕರೆಯಲ್ಪಡುವ ದಲೀಪ್ ಸಿಂಗ್ ರಾಣಾ ಇಂದು ಮುಂಜಾನೆ ದೆಹಲಿ ತಲುಪಿದರು, ಅವರನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಬಿಜೆಪಿಗೆ ಸ್ವಾಗತಿಸಿದರು.

“ನಾನು ಬಿಜೆಪಿಯ ಸಿದ್ಧಾಂತದಿಂದ ಪ್ರೇರಿತನಾಗಿ ಪಕ್ಷಕ್ಕೆ ಸೇರಿದ್ದೇನೆ. ದೇಶಕ್ಕಾಗಿ ಅವರ ಕೆಲಸವನ್ನು ನಾನು ಮೆಚ್ಚುತ್ತೇನೆ. ಪಕ್ಷದ ಸಿದ್ಧಾಂತವು ಭಾರತದ ಪ್ರಗತಿಯನ್ನು ಗುರಿಯಾಗಿರಿಸಿಕೊಂಡಿದೆ ಮತ್ತು ನಾನು ಬಿಜೆಪಿಯ ಗುಣಮಟ್ಟಕ್ಕೆ ತಕ್ಕಂತೆ ಬದುಕಲು ಸಾಧ್ಯವಾಗುತ್ತದೆ ನಾನು ಭಾವಿಸುತ್ತೇನೆ” ಎಂದು ಖಲಿ ಹೇಳಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!