May 18, 2026

ವಿದೇಶಗಳಿಂದ ಬರುವವರಿಗೆ ಶುಭ ಸುದ್ದಿ ನೀಡಿದ ಕೇಂದ್ರ: 7 ದಿನಗಳ ಕ್ವಾರಂಟೈನ್ ರದ್ದು..!

0
IMG_20220210_162836.jpg

ನವದೆಹಲಿ: ವಿದೇಶಗಳಿಂದ ಭಾರತಕ್ಕೆ ಆಗಮಿಸುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಶುಭ ಸುದ್ದಿ ನೀಡಿದೆ. ಈ ಹಿಂದೆ ಕಡ್ಡಾಯಗೊಳಿಸಿದ್ದ ಏಳು ದಿನಗಳ ‘ಹೋಮ್ ಕ್ವಾರಂಟೈನ್’ ಅನ್ನು ರದ್ದುಗೊಳಿಸಲಾಗಿದೆ.
ಮತ್ತು ಈ ಬಗ್ಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. 7 ದಿನಗಳ ಕ್ವಾರಂಟೈನ್ ಬದಲಿಗೆ 14 ದಿನಗಳ ಸ್ವಯಂ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

ಫೆ. 14ರಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ. ಜೊತೆಗೆ ಅಪಾಯವಿರುವ ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳು ಎಂಬ ಪಟ್ಟಿಯನ್ನು ಮಾರ್ಗಸೂಚಿಯಲ್ಲಿ ತೆಗೆದುಹಾಕಲಾಗಿದೆ.

ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯನ್ನು ‘ಏರ್‌ ಸುವಿದಾ’ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದರ ಜೊತೆಗೆ ಪೂರ್ಣ ಲಸಿಕೆ ಪಡೆದ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನು 82 ರಾಷ್ಟ್ರಗಳಿಂದ ಬರುವವರಿಗೆ ನೀಡಲಾಗಿದೆ ಎಂದು ಆರೋಗ್ಯ ಇಲಾಘೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

error: Content is protected !!