March 21, 2026

ಎಂ.ಫ್ರೆಂಡ್ಸ್ ನಿಂದ ವೆನ್ಲಾಕ್ ಆಸ್ಪತ್ರೆಗೆ ಗಾಲಿಕುರ್ಚಿಗಳ ಕೊಡುಗೆ

0
IMG-20220210-WA0119.jpg

ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಗಾಲಿಕುರ್ಚಿಗಳನ್ನು ಬುಧವಾರ (09/02) ಆಸ್ಪತ್ರೆ ವಠಾರದಲ್ಲಿ ಹಸ್ತಾಂತರಿಸಲಾಯಿತು.

ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಕಳೆದ 4 ವರ್ಷಗಳಿಂದ ಅನ್ನದಾನದ ಜೊತೆಗೆ ರೋಗಿಗಳ ಕೆಲವೊಂದು ಖಾಸಗಿ ಸಮಸ್ಯೆಗಳಿಗೂ ಸ್ಪಂದಿಸಿ ನೆರವು ನೀಡುತ್ತಿರುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯ ಸರಕಾರೀ ಸೇವೆಯ ಜೊತೆಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ. ಪ್ರಸ್ತುತ ತುರ್ತು ಬೇಡಿಕೆಯಾಗಿದ್ದ ಗಾಲಿಕುರ್ಚಿಯನ್ನು ಪ್ರಾಯೋಜಿಸಿದೆ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆಯ ಆರ್.ಎಂ.ಓ. ಡಾ| ಸುಧಾಕರ್ ಟಿ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸೇವೆಗೆ ಅವಕಾಶ ಮಾಡಿಕೊಟ್ಟ ಆಸ್ಪತ್ರೆ ಅಧಿಕಾರಿಗಳು ಕೃತಜ್ಞರು ಎಂದು ಹೇಳಿದರು. ಈ ಸಂದರ್ಭ ಎಂ.ಫ್ರೆಂಡ್ಸ್ ಸದಸ್ಯರಾದ ಹಮೀದ್ ಅತ್ತೂರು, ಎಡ್ವಕೇಟ್ ಶೇಖ್ ಇಸಾಕ್, ಅಶ್ಫಾಕ್, ವೆನ್ಲಾಕ್ ಆಸ್ಪತ್ರೆಯ ಸುಕೇಶ್, ಭವಾನಿ, ಮೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!