February 2, 2026

ಸುಳ್ಯ: ನಾಗಪಟ್ಟಣ ಬಳಿ ಕಾರು ಪಲ್ಟಿ: ಕಾರಿನಲ್ಲಿದ್ದ ಯುವಕ ಯುವತಿ ಅದೃಷ್ಟವಶಾತ್ ಪಾರು

0
IMG_20220208_152110.jpg

ಸುಳ್ಯ: ನಾಗಪಟ್ಟಣ ಗೆಸ್ಟ್ ಹೌಸ್ ಬಳಿ ಕೇರಳದ ಬಂದಡ್ಕ ಕಡೆಯಿಂದ ಬರುತ್ತಿದ್ದ ಬೆಲೆನೊ KA 12 MB0650 ಕಾರೊಂದು‌ ಅತೀ ವೇಗದಿಂದ ಬಂದು ನಾಗಪಟ್ಟಣ ವಿಶ್ರಾಂತಿ ಗೃಹದ ಬಳಿಯ ತಿರುವಿನಲ್ಲಿ ಪಲ್ಟಿಯಾದ ಘಟನೆ ಫೆ 8 ರಂದು ಸಂಭವಿಸಿದೆ.

ಕಾರಿನಲ್ಲಿ ಮಡಿಕೇರಿ ಮೂಲದ ಯುವಕ ಮತ್ತು ಯುವತಿಇದ್ದು ಇವರಿಬ್ಬರು ಕೇರಳದ ಬಂದಡ್ಕ ಕಡೆಯಿಂದ ಕೋಲ್ಚಾರು ಮಾರ್ಗವಾಗಿ ಸುಳ್ಯದತ್ತ ಬರುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಚರಂಡಿಗೆ ಮಗುಚಿ ಬಿತ್ತು.

ಪರಿಣಾಮ ಕಾರಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಯುವಕ ಮತ್ತು ಯುವತಿ ಅನ್ಯಕೋಮಿನವರಾಗಿದ್ದು, ಅವರ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!