March 21, 2026

ಕಾಸರಗೋಡು: ಎಸ್ಸೈ ಸೇರಿದಂತೆ ನಾಲ್ವರು ಪೊಲೀಸರಿಗೆ ಹಲ್ಲೆ, ಆರೋಪಿಯ ಬಂಧನ

0
image_editor_output_image41095261-1644296837033.jpg

ಕಾಸರಗೋಡು: ಪೊಲೀಸರ ಮೇಲೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ನಗರ ಹೊರವಲಯದ ಅಣ೦ಗೂರು ಎಂಬಲ್ಲಿ ಇಂದು ರಾತ್ರಿ ನಡೆದಿದ್ದು, ಎಸ್.ಐ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ಅಣಂಗೂರಿನ ಬಾರ್ ವೊಂದರಲ್ಲಿ ದಾಂದಲೆ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಸ್ಥಳಕ್ಕೆ ತಲಪಿದ ಕಾಸರಗೋಡು ಪೊಲೀಸರ ಮೇಲೆ ತಂಡವು ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದು, ನಾಲ್ವರು ಪೊಲೀಸರು ಗಾಯಗೊಂಡರು. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನನ್ನು ಆಲೂರು ನಿವಾಸಿ ಮುನೀರ್ ಎಂದು ಗುರುತಿಸಲಾಗಿದೆ. ಈತ ಹಲವು ಪ್ರಕರಣ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!